ಚಂದ್ರನ ಪಯಣ
ಬಾನಂಗಣದಲಿ ಸರಿಯುತಿರುವನು ಶಶಿಯು
ದಿನರಾಜ ದಿನಕರನ ಇರುಳ ಪ್ರತಿನಿಧಿಯಂತೆ
ಉದಯಿಸಿದ ಕೆಸರ ಕೆಂದಾವರೆಯಂತೆ
ನಿಶೆಯ ನಶಿಸುತ್ತ ನಡೆದ ಹಾಲ್ಗೆನ್ನೆಯ ಶಿಶುವಂತೆ
ಅಳಿಯಿತು ಅರಾಜಕತೆ ಬೆಳೆಯಿತು ಮೋಹಕತೆ
ಇರುಳಾಯಿತು ಅನನ್ಯ ಅತುಲ ಚೆಲುವಿನೊರತೆ
ಉಕ್ಕಿತು ರತ್ನದಾಗರ, ನಾಚಿತು ಕಡಲ ಕಿನಾರ
ನಡುವೆ ನಾವೆಯ ದಾರಿ ಕಂಡಿತು ಬಲುದೂರ
ಶಶಿಯ ಸೆಳೆತಕೆ ಸೂಲೋಪ್ಪಿತು ಶಶಕ
ಒಪ್ಪಿಸಿತು ತನ್ನ ತನವ, ಶಶಿಯಾದನು ಶಶಾಂಕ
ಹಿರಿ ಹಿಗ್ಗಿದವು ನಿಶಾಚರಿಗಳು ಮೊಳಗಿತು ಝೇಂಕಾರ
ಸರಿರಾತ್ರಿಯೊಳು ಸ್ವರರಾಗಗಳ ಮಹಾಪೂರ
ಕಂಡನು ಶಶಿ ಕನಸುಗಳ ಸರಮಾಲೆ
ನೂರಾರು ಮನಗಳ ಬಿಂಬದ ಮೇಲೆ
ಆಲಿಸಿದ ರೈತನ ತವಕ ಬೆಳಗಿನ ತನಕ
ಅರಿತನು ಹದಿಹರೆಯದ ಮಾಯಾಲೋಕ
ಇರುಳೆನಿಸಿತು ಪ್ರಾರ್ಥನೆಗಳ ಮಹಾಶಾಲೆ
ಯೋಚನೆಗಳ ಮೂರ್ತಸ್ವರೂಪದ ಟಂಕಸಾಲೆ
ದಿನಕರನ ರಾಜ್ಯದ ರಾತ್ರಿ ಕಾವಲುಗಾರ
ಚಂದ್ರನಾದನು ದೇವನಲ್ಲಿಗೆ ಕನಸುಗಳೊಯ್ಯುವ ಸರದಾರ
ಬಂದಿತು ಅಂತ್ಯ ಚಂದನ ಚಂದದ ಪಯಣಕೆ
ಮತ್ತೆ ತಾ ಬರುವೆನೆಂದು ಮರೆಯಾದ ಗರಿಗಳ ಹಿಂದೆ
ಹಗಲಿರುಳುಗಳಲೆಗಳಲಿ ತೊಯ್ದಾಡುವ ಬಾಳನೌಕೆ
ಕಂಡಿತು ಬಹಳ ಹಿಂದೆ...
ಪರಿಪೂರ್ಣತೆಯ ದಡಕಿಂತ ಬಹಳ ಹಿಂದೆ
ಬಾನಂಗಣದಲಿ ಸರಿಯುತಿರುವನು ಶಶಿಯು
ದಿನರಾಜ ದಿನಕರನ ಇರುಳ ಪ್ರತಿನಿಧಿಯಂತೆ
ಉದಯಿಸಿದ ಕೆಸರ ಕೆಂದಾವರೆಯಂತೆ
ನಿಶೆಯ ನಶಿಸುತ್ತ ನಡೆದ ಹಾಲ್ಗೆನ್ನೆಯ ಶಿಶುವಂತೆ
ಅಳಿಯಿತು ಅರಾಜಕತೆ ಬೆಳೆಯಿತು ಮೋಹಕತೆ
ಇರುಳಾಯಿತು ಅನನ್ಯ ಅತುಲ ಚೆಲುವಿನೊರತೆ
ಉಕ್ಕಿತು ರತ್ನದಾಗರ, ನಾಚಿತು ಕಡಲ ಕಿನಾರ
ನಡುವೆ ನಾವೆಯ ದಾರಿ ಕಂಡಿತು ಬಲುದೂರ
ಶಶಿಯ ಸೆಳೆತಕೆ ಸೂಲೋಪ್ಪಿತು ಶಶಕ
ಒಪ್ಪಿಸಿತು ತನ್ನ ತನವ, ಶಶಿಯಾದನು ಶಶಾಂಕ
ಹಿರಿ ಹಿಗ್ಗಿದವು ನಿಶಾಚರಿಗಳು ಮೊಳಗಿತು ಝೇಂಕಾರ
ಸರಿರಾತ್ರಿಯೊಳು ಸ್ವರರಾಗಗಳ ಮಹಾಪೂರ
ಕಂಡನು ಶಶಿ ಕನಸುಗಳ ಸರಮಾಲೆ
ನೂರಾರು ಮನಗಳ ಬಿಂಬದ ಮೇಲೆ
ಆಲಿಸಿದ ರೈತನ ತವಕ ಬೆಳಗಿನ ತನಕ
ಅರಿತನು ಹದಿಹರೆಯದ ಮಾಯಾಲೋಕ
ಇರುಳೆನಿಸಿತು ಪ್ರಾರ್ಥನೆಗಳ ಮಹಾಶಾಲೆ
ಯೋಚನೆಗಳ ಮೂರ್ತಸ್ವರೂಪದ ಟಂಕಸಾಲೆ
ದಿನಕರನ ರಾಜ್ಯದ ರಾತ್ರಿ ಕಾವಲುಗಾರ
ಚಂದ್ರನಾದನು ದೇವನಲ್ಲಿಗೆ ಕನಸುಗಳೊಯ್ಯುವ ಸರದಾರ
ಬಂದಿತು ಅಂತ್ಯ ಚಂದನ ಚಂದದ ಪಯಣಕೆ
ಮತ್ತೆ ತಾ ಬರುವೆನೆಂದು ಮರೆಯಾದ ಗರಿಗಳ ಹಿಂದೆ
ಹಗಲಿರುಳುಗಳಲೆಗಳಲಿ ತೊಯ್ದಾಡುವ ಬಾಳನೌಕೆ
ಕಂಡಿತು ಬಹಳ ಹಿಂದೆ...
ಪರಿಪೂರ್ಣತೆಯ ದಡಕಿಂತ ಬಹಳ ಹಿಂದೆ